Friday, December 26, 2008

ನೆನಪು

ಗಂಡೆನಿಸಿಕೊಂಡ ನನ್ನ
ಏನೂ, ಎಂದೂ, ಯಾವತ್ತೂ
ಬಾಧಿಸದಷ್ಟು, ನೋಯಿಸಿದ್ದು,
ನಿನ್ನ ನೆನಪು.

Wednesday, December 10, 2008

ನೋವು

ನನಗೂ ಗೊತ್ತು
ನೀನು ಹಗಲಿರುಳೆನ್ನದೆ ಕೊರಗುತ್ತಿರುವೆ
ಮರೆಯಲೂ ಆಗದೇ, ಮನಸೂ ಕೊಡದೇ
ನೋಯುತ್ತಿರುವೆ
ಮರೆತುಬಿಡು ಒಮ್ಮೆ ಏಕೆಂದರೆ
ಮರೆವೇ ನಿನ್ನ ನೋವ್ವಿಗೆ ಮದ್ದು.

ಮನಸು

ನೀನೇ ಬಿಚ್ಚಿಟ್ಟ ಮನಸು
ನಿನದೇ ನೆನಪುಗಳು ಅಕ್ಷರವಾಗಿವೆ ಇಲ್ಲಿ
ಈಗೇಕೆ ಮುಚ್ಚಿಟ್ಟೆ?
ಮುಚ್ಚಿದರೂ ಬೇಸರವಿಲ್ಲ
ಎಸೆಯಬೇಡ ಅಷ್ಟೇ
ಬೆಂಕಿ ಇಟ್ಟರೂ ತುಸು ಕಾಲ ಬೆಳಕಾದೀತು ಅದು.

Friday, December 5, 2008

ಕಡೆಯ ಮಾತು?

ಹೇಳಿ ಬಿಡು ಕಟ್ಟ ಕಡೆಯ ಮಾತ
ಕಾರಣವೇನೆಂದು ವಿಧಾಯಕೆ
ನಿನ್ನಂತರಾಳದ ಮಾತು ಬಿಚ್ಚಿಡು ಬೇಗ
ದೊರೆತೀತು ಬಿಡುಗಡೆ ಬಂಧನಕ್ಕೆ.

ಚಿಗುರು

ಬಾಡಲಿ ಬಿಡು
ನೀನೇ ಬತ್ತಿಸಿದ ಬಳ್ಳಿ
ಮತ್ತೆ ನೀರೆರೆಯಬೇಡ
ಆಸೆಗಳ ಹೊತ್ತು ನರಳುವಂತೆ.

Tuesday, December 2, 2008

ವರ್ತಮಾನ

ನಡುರಾತ್ರಿಯ ನಿದಿರೆಯಲ್ಲೂ

ಎಚ್ಚರಾಗಿರುತ್ತೇನೆ

ಏಕೆಂದರೆ

ನಿನ್ನ ನೆನಪೆಂಬ ಭಯೋತ್ಪಾದಕ

ನನ್ನ ಮನಸೂರೆ ಗೈಯ್ಯುವ ವರ್ತಮಾನವಿದೆ.

ನಿರ್ಬಂಧ

ಕಣ್ಣು ಮುಚ್ಚಿಕೊಂಡರೂ
ಕನಸಾಗಿ ಕಾಡುತ್ತಿದೆ ನಿನ್ನ ಒಡನಾಟ
ಮತ್ತಷ್ಟು ದೂರ ಸರಿ
ಕಲ್ಪನೆಗೂ ನಿಲುಕದಂತೆ.