Wednesday, October 29, 2008

ದೀಪ

ದೀಪಾವಳಿಯ ರಾಕೆಟ್ಟಿನಂತೆ ಬಂದ
ನಿನ್ನ ಎಸ್ಸೆಮ್ಮೆಸ್ಸು
ನನ್ನ ಬದುಕನ್ನೇ ಸುಟ್ಟು ಹಾಕಿತು.

Tuesday, October 14, 2008

ಹಾಗೇ ಉಳಿದ ಮಾತು

ವಿನಿಮಯಗೊಂಡಿದ್ದು ಮಿತಿಇಲ್ಲದಷ್ಟು ಮಾತು
ಬರೆದದ್ದು ನೂರಾರು ಪತ್ರ
ಹಂಚಿಕೊಂಡ ವಿಷಯಕ್ಕೆ ಲೆಕ್ಕವೇ ಇಲ್ಲ
ಆದರೂ
ಬಹುಮುಖ್ಯವಾದ ವಿಷಯ ಇನ್ನು ಹಾಗೆಯೇ ಉಳಿದಿದೆ.

Monday, October 13, 2008

ವ್ಯರ್ಥ

ಪೋನು, ಚಾಟು, ಇಂಟರ್ನೆಟ್ಟು
ಪತ್ರ, ಈಮೇಲು, ಮೊಬೈಲು
ಎಲ್ಲವೂ ನಿರರ್ಥಕವಾಗಿವೆ
ಏಕೆಂದರೆ ಅವಳು ಮೌನಕ್ಕೆ ಮೊರೆ ಹೋಗಿದ್ದಾಳೆ.

ಅವಳ ಹೆಜ್ಜೆ

ಗಂಗಾ ಯಮುನೆಯ ಜಲದಂತೆ ಬೆರೆತ ನಾವು
ಲೀನವಾಗಿದ್ದೆವು ಪ್ರೇಮ ಸಮುದ್ರದಲ್ಲಿ
ಆದರೆ ಸುಳಿವೇ ಕೊಡದೆ ಹೊರಟು ಹೋದೆ
ಬಣ್ಣದ ಮೀನಿನಂತೆ
ನಿನ್ನ ಹೆಜ್ಜೆಯ ಜಾಡನ್ನೂ ಬಿಡದೆ.

ಚಳಿಯ ನೆನಪು

ಹತ್ತಾರು ವರ್ಷಗಳಾಗಿತ್ತು
ಮೈಕೊರೆಯುವ ಚಳಿಯ ಕಹಿ ಕಂಡು
ಏಕೆಂದರೆ ಆಗೆಲ್ಲವೂ ನನ್ನ ಮಗ್ಗುಲಲ್ಲಿ
ಬೆಚ್ಚಗೆ ನೀನಿದ್ದೆ.