Saturday, December 24, 2011

ಅತ್ಯಗತ್ಯ

ಅಗತ್ಯವೇ ಆಗಿದ್ದರೂ
ತಿರಸ್ಕಾರ ಅನಿವಾರ್ಯವಾಗಿತ್ತು ಅಂದು
ಅಗತ್ಯ ಅನಿವಾರ್ಯಗಳೆರಡೂ ಒಗ್ಗೂಡಿ ಕೇಳುತ್ತಿವೆ
'ಅಗತ್ಯ' ಅತ್ಯಗತ್ಯವೆಂದು

ಮತ್ತೆ ವಸಂತ?

ಹತಾಶೆ, ಆತಂಕ, ನಿಟ್ಟುಸಿರು
ಯಾವುದು ಎಷ್ಟೇ ಕಾಡಿದರೂ
ಮನಸು ಮಾತ್ರ ತಾಳ್ಮೆಗೆಡಲಿಲ್ಲ
ಮತ್ತೊಂದು ವಸಂತದ ನಿರೀಕ್ಷೆಯಲ್ಲಿ

ಮುಗಿಯದ ಹಾಡು

ಕೇಳುಗರಿಲ್ಲ
ಮೆಚ್ಚುಗೆ ಇಲ್ಲ
ಚಪ್ಪಾಳೆಯ ಸದ್ದಂತೂ ಇಲ್ಲವೇ ಇಲ್ಲ
ಆದರೂ ಮನದಾಳದ ಕೋಗಿಲೆಯ ಹಾಡು
ಕೊನೆಯಾಗುತ್ತಿಲ್ಲ

ಬದಲಾಗದು

ಊರುಗಳು ಬದಲಾದವು
ಉದ್ಯೋಗಗಳೂ ಬದಲಾದವು
ಬದಲಾದ ಮನೆಗಳೂ ಅದೆಷ್ಟೋ
ಮನದ ಆಸೆ ಮಾತ್ರ ಬತ್ತಲೂ ಇಲ್ಲ
ಬದಲಾಗುತ್ತಲೂ ಇಲ್ಲ

Friday, December 26, 2008

ನೆನಪು

ಗಂಡೆನಿಸಿಕೊಂಡ ನನ್ನ
ಏನೂ, ಎಂದೂ, ಯಾವತ್ತೂ
ಬಾಧಿಸದಷ್ಟು, ನೋಯಿಸಿದ್ದು,
ನಿನ್ನ ನೆನಪು.

Wednesday, December 10, 2008

ನೋವು

ನನಗೂ ಗೊತ್ತು
ನೀನು ಹಗಲಿರುಳೆನ್ನದೆ ಕೊರಗುತ್ತಿರುವೆ
ಮರೆಯಲೂ ಆಗದೇ, ಮನಸೂ ಕೊಡದೇ
ನೋಯುತ್ತಿರುವೆ
ಮರೆತುಬಿಡು ಒಮ್ಮೆ ಏಕೆಂದರೆ
ಮರೆವೇ ನಿನ್ನ ನೋವ್ವಿಗೆ ಮದ್ದು.

ಮನಸು

ನೀನೇ ಬಿಚ್ಚಿಟ್ಟ ಮನಸು
ನಿನದೇ ನೆನಪುಗಳು ಅಕ್ಷರವಾಗಿವೆ ಇಲ್ಲಿ
ಈಗೇಕೆ ಮುಚ್ಚಿಟ್ಟೆ?
ಮುಚ್ಚಿದರೂ ಬೇಸರವಿಲ್ಲ
ಎಸೆಯಬೇಡ ಅಷ್ಟೇ
ಬೆಂಕಿ ಇಟ್ಟರೂ ತುಸು ಕಾಲ ಬೆಳಕಾದೀತು ಅದು.